ವಿರೇಂದ್ರ ಸೆಹವಾಗ್' ಇವರು ಭಾರತ ಕ್ರಿಕೆಟ್ ತಂಡದ ಸದಸ್ಯರು ಮತ್ತು ಆಕ್ರಮಣಕಾರಿ ಆರಂಭಿಕ ಬಲಗೈ ಬ್ಯಾಟ್ಸಮನ್ನರು. ಇವರನ್ನು ನವಾಬ್ ಆಫ್ ನಜಾಫಗಡ್ ಎಂದು ಕರೆಯುತ್ತಾರೆ. ಎರಡು ತ್ರಿಶತಕಗಳನ್ನು ಬಾರಿಸಿರುವ ಕೇವಲ ಮೂರು ಬ್ಯಾಟ್ಸಮನ್ನರುಗಳಲ್ಲಿ ಇವರು ಒಬ್ಬರು. ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರವಾಗಿ ಅತಿ ಹೆಚ್ಚಿನ ವೈಯಕ್ತಿಕ ರನ್ನುಗಳನ್ನು ಬಾರಿಸಿದ ಸಾಧನೆ ಇವರದಾಗಿದೆ. ೨೦೦೪ರಲ್ಲಿ ಇವರು ಪಾಕಿಸ್ತಾನ ತಂಡದ ವಿರುದ್ಧ ೩೧೯ರನ್ನುಗಳನ್ನು ಬಾರಿಸಿದ್ದೇ ಆ ಸಾಧನೆ. ಅದೇ ರೀತಿ ಅತೀ ಕಡಿಮೆ ಚೆಂಡುಗಳಲ್ಲಿ ತ್ರಿಶತಕ ಬಾರಿಸಿದ ದಾಖಲೆಯು ಇವರ ಹೆಸರಿನಲ್ಲಿದೆ. ಇವರು ರಣಜಿ ಪಂದ್ಯಾವಳಿಯಲ್ಲಿ ದೆಹಲಿ ತಂಡದ ಪರವಾಗಿ ಆಡುತ್ತಾರೆ. ಇವರು ಕೆಲವು ಪಂದ್ಯಗಳಲ್ಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕತ್ವವನ್ನೂ ವಹಿಸಿಕೊಂಡಿದ್ದಾರೆ. == ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿನ ಶತಕಗಳು == === ಅಂತರ್ರಾಷ್ಟ್ರೀಯ ಟೆಸ್ಟ್ ಪಂದ್ಯಗಳಲ್ಲಿನ ಶತಕಗಳು === === ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿನ ಶತಕಗಳು === == ಟೆಸ್ಟ್ ಪಂದ್ಯಗಳಲ್ಲಿ ಪ್ರಶಸ್ತಿಗಳು == === ಮ್ಯಾನ್ ಆಫ್ ಸಿರೀಜ್ ಪ್ರಶಸ್ತಿ === === ಮ್ಯಾನ್ ಆಫ್ ಮ್ಯಾಚ್ ಪ್ರಶಸ್ತಿ ===